ಎಲ್ಲೂ ಸಾಗದ ಗೊತ್ತು ಗುರಿ ಇಲ್ಲದ್ ಕಡೆ ಪಯಣ
ನಾಳೆಗಳ ಹಣತೆಯಲ್ಲಿ ಬೆಳಕಾಗಲು ಕಾಯುತ್ತಿರುವ ಕನಸಿನ ತೋರಣ
"ಇದು ಬರೀ ಟೆರ್ರಾಕೋಟಾ ದೀಪಗಳು ಕಣೆ. .!! ಬಿದ್ದರೆ ಒಡೆಯುವ"
ಎನ್ನುವ ಅವನತ್ತ ಸೆಳೆಯುವ ಮನ.. ತೆಲೆತಿವಿದೊಮ್ಮೆ ಕೇಳಬೇಕೆನಿಸಿದೆ,
"ಆ ಬಣ್ಣ ಬಣ್ಣಗಳ ಪ್ಲಾಸ್ಟಿಕ್‌ನಲ್ಲಿದೆಯೇ ಈ ಮಣ್ಣಿನ್ ಘಮ??"
ಸದ್ದಾಗುತ್ತಿರುವ್ ಮೊಬೈಲ್ನಲ್ಲಿ ಮಾತಾಡುತ್ತಿರು ಅತ್ತಿಗೆಯೊಂದಿಗೆ
ತೇಲಿಬಂದಿದೆ ಕಾದ್ ಎಣ್ಣೆಯಲ್ಲಿ ಮಿಂದೇಳುತ್ತಿರುವ್ ಚಕ್ಕುಲಿಯ ನಾದಸ್ವರ್,
ಮತ್ತೊಮ್ಮೆ ನೆನಪಿಸಿದೆ ತವರಿನ ದಿನಗಳನ್ನ..
ಹುಷಾರು..!! ಕೆಡಸಬೇಡ, ಒಪ್ಪವಾಗಿ ಬಿಡಿಸಿದ ರಂಗೋಲಿ
ಎನ್ನುವ ಅಮ್ಮನನ್ನು ತಬ್ಬಿಕೊಂಡು ಹೇಳಬೇಕಿದೆ "ಇರಲಿ ಬಿಡಮ್ಮ..!!
ನನ್ನ ಲಂಗಕ್ಕೆ ಈ ನಿನ್ನ ರಂಗೋಲಿ ಸೇರಿಸುವುದು ಮತ್ತಷ್ಟು ಬಣ್ಣಗಳನ್ನ್"
"ಹಾಕು ಮನಸ್ಸಿಗೆ ಲಗಾಮು, ತೆಗೆದುಕೊ ಈ ನಿನ್ನ ದೀಪಗಳು.."
ಎನ್ನುವ ಅವನತ್ತ ತಿರುಗಿ ಹೇಳಾಗಿದೆ "ಹಬ್ಬ ಕಣೋ.. ಸಹಜ ಮನೆಯ ನೆನಪು"
"ಇಗೋ..." ಎಂದು ಬೊಗಸೆ ತುಂಬಾ ಬಣ್ಣಗಳನ್ನು ತುಂಬಿ
"ಬಾ.. ನಿನ್ನ ಹಣತೆಗಳನ್ನ ಕಲರ್ ಕಲರಾಗಿಸುವಾ..." ಎಂದು ನಕ್ಕಾಗ
ಮನ ಹೇಳಿದೆ....
"ನಿನಗಿಂತ ಬೇರೇನಿದೆ ಸಂಭ್ರಮ್..."
No comments:
Post a Comment