ಬದುಕೆಂಬ್ ಸ್ಕೂಲಿನ
ಆತಿದಡ್ಡ ಸ್ಟೂಡೆಂಟ್ ನಾನು
"ಬುಕ್ಸ್ ಏನೋ ಖುಷಿ ಕೊಡತ್ತೆ ಆದ್ರೆ
ಅವನ್ನೇನು ನೆಚ್ಚಿಕೊಂಡಿರೋಕಾಗತ್ತಾ?"
ಎಂದು ಅವ್ ಕಳಿಸಿದ ವಾಟ್ಸಪ್ ಮೆಸೇಜಿನಲ್ಲಿ
ನೋ ಕಮೆಂಟ್ಸ್ ಅಂತ ಟೈಪ್
ಮಾಡಲು ಬೇಸರಿಸಿಕೂಂಡಿರುವ ಈ ಮನವು
ನೀನಿರದ ರಾತ್ರಿಗಳಲ್ಲಿನನ್ನೊಂದಿಗಿದಿದ್ದೆ
ಆ ಅಕ್ಷರಗಳಲ್ವೇನೋ ? ಅಂತ ಕೇಳಬೇಕೆನಿಸಿದರು
ಯಾಕೋ ತಮ್ಮನ್ನು ತಾವೇ ವಿತ್‌ಡ್ರಾ
ಮಾಡಿಕೂಂಡಿರುವ್ ಭಾವನೆಗಳ
ನಡುವೆ ಸಿಲುಕಿರುವ ಟೈಮಿನಲ್ಲಿ
ಬುಕ್ ಎಕ್ಷಿಬಿಶನ ಅನ್ನೋ ಫೋಟೋ ಕಳ್ಸಿ
"ಹೋಗೋಣ್ವಾ?" ಎಂದು ಕಣ್ಣು ಮೀಟ್ಕಿಸುವ
ಎಮೊಜೀ ಹಾಕಿದ ಇವನು ಮತ್ತೆ ಮತ್ತೆ ನೆನಪಾಗಿ
ಕಾಳಜಿ ಎಂಬ ಸಪ್ಲಿನ ನೆಟ್ಟು ಅದ್ನ ಕಾಡಿ ಕೆಣಕಿ
ಡಿಸ್ಟರ್ಬ್ ಮಾಡಿ, ನೀರ ಹಾಕಿ
ಬಳ್ಳಿಯಾಗಿ ಹರಡಿಸುವ ಇವನ ರೀತಿಯನ್ನು
ಪ್ರೀತಿಸದಿರಲಾದೆನು..