Friday, 13 January 2017

ಕವಿತೆಗಳ ಕೊನೆಯ ಸಾಲಿನ ಕಾರಣ..




ನೆನಪುಗಳು
ಅಕ್ಷರಗಳಾಗಿ ಪ್ರತಿಭಟಿಸಿದಾಗ
ಸುಕ್ಕು ಗಟ್ಟಿದ ಹಾಳೆಯಲ್ಲಿ
ಗೀಚಿ - ಗೀಟಾಕಿ ನಶಿಸಿಹೋದ
ಆದಿ ಅಂತ್ಯಗಳಿಲ್ಲದ
ಸಾಲುಗಳಿವು

****

ನೆನಪುಗಳೇ ಹೀಗೆ
ಮಾಸಿದ ಗೋಡೆ ಬಣ್ಣದಂತೆ
ಮರೆಮಾಚುವುದು ಅಷ್ಟು ಸುಲಭವಲ್ಲ

****

ಮನಸ್ಸಿನಂಗಳದಲ್ಲಿ ರಂಗೋಲಿ ಬರೆದು
ನಾಳೆಗಳೆಂಬ ಬಣ್ಣ ತುಂಬಿ
ಕನಸಿಣ್ಣೆ ಹಾಕಿ ಹಚ್ಚಿಟ್ಟ
ದೀಪವೇ ನೀನು

****

ಏನಿಲ್ಲ
ನಿನ್ನ ಕವಿತೆಗಳ
ಕೊನೆಯ ಸಾಲಿನ

ಕಾರಣವಾಗಬೇಕಿತ್ತಷ್ಟೆ.. 

12 comments:

  1. This comment has been removed by the author.

    ReplyDelete
  2. ಅದ್ಭುತ ಸಣ್ಣ ಕವಿತೆಗಳಲ್ಲೊಂದು...Very well written✌

    ReplyDelete
  3. ಒಳ್ಳೆಯ ಬರವಣಿಗೆ ಮಾಡಮ್ ..ಮನಕ್ಕೆ ಬಾಳ್ ಹಿಡಿಸಿತು..ನಿಮ್ಮ ಒಪ್ಪಿಗೆ ಮೇರಿಗೆ ನಾನು ಕದ್ದಿಯುತ್ತೆದ್ದೆನೆ ಆ ನಿಮ್ಮ ಸಾಲುಗಳನ್ನು.

    ReplyDelete
  4. ಸೂಪರ್ ಬರವಣಿಗೆ...
    ಶುಭವಾಗಲಿ

    ReplyDelete
  5. This comment has been removed by the author.

    ReplyDelete
  6. This comment has been removed by the author.

    ReplyDelete
  7. This comment has been removed by the author.

    ReplyDelete
  8. This comment has been removed by the author.

    ReplyDelete